Facilities

ವಿಶಾಲವಾದ ಕೊಠಡಿಗಳು

ನಮ್ಮ ಪ್ರೌಢಶಾಲೆಯು ವಿಶಾಲವಾದ ತರಗತಿ ಕೊಠಡಿಗಳನ್ನು ಹೊಂದಿದ್ದು, ಗರಿಷ್ಠ 60 ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆ ಹೊಂದಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ವಯಕ್ತಿಕ ಪ್ರಾಮುಖ್ಯತೆಯನ್ನ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ವಯಕ್ತಿಕ ಪ್ರಾಮುಖ್ಯತೆಯನ್ನ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನ ಹೆಚ್ಚಿಸುತ್ತಿದೆ. ಮುಲಭೂತ ಸೌಕರ್ಯವು ಶಾಲೆಯ ಗುಣಮಟ್ಟದ ಅತ್ಯದ್ಭುತ ಅಂಶವಾಗಿರುತ್ತದೆ. ವಿದ್ಯಾರ್ಥಿಗಳ ಶಾಲಾ ಚಟುವಟಿಕೆಗೆ ಶಾಲೆಯ ವಾತಾವರಣದ ಪರಿಣಾಮವಿರುವುದು. ಇದಕ್ಕಾಗಿ ಶಾಲೆಯ ಕಟ್ಟಡದ ಗುಣಮಟ್ಟ, ಸ್ವಚ್ಛತೆ, ಪೀಠೋಪಕರಣದ ಗುಣಮಟ್ಟ ಹಾಗು ವರ್ಣರಂಜಿತ ವಾತಾವರಣವು ಅತ್ಯಗತ್ಯ.

ಅನುಭವಿ ಅಧ್ಯಾಪಕರು

ವಿದ್ಯಾರ್ಥಿಗಳು ಉತ್ತಮ ದರ್ಜೆ ಪಡೆಯುದರಲ್ಲಿ ಗುಣಮಟ್ಟದ ಶಿಕ್ಷಕರ ಕೈ ಅತ್ಯಗತ್ಯ ಬೇಕಾಗುದು ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಂದ ಪಡೆದ, ಹೆಚ್ಚು ಅರ್ಹತೆ ಮತ್ತು ಅನುಭವಿ ಶಿಕ್ಷಕರು ನಮ್ಮ ಶಾಲೆಯ ದೊಡ್ಡ ಆಸ್ತಿಯಾಗಿದೆ. ಅನುಭವಿ ಅಧ್ಯಾಪಕ ವೃಂದವು ಶಾಲೆಯ ಅತ್ಯ ಅಮೂಲ್ಯ ಆಸ್ತಿಯಾಗಿರುವುದು. ಇದರಂತೆ ನಮ್ಮ ಪ್ರಾಢಶಾಲೆಯು ತಲೆತಲಾಂತರದಿಂದಲೂ ಉತ್ತಮ ದರ್ಜೆಯ ಶಿಕ್ಷಕ ವೃಂದವನ್ನ ಹೊಂದಿಕೊಂಡು ಬಂದಿರುವ ಶಾಲೆ. ನಮ್ಮ ಅಧ್ಯಾಪಕರು ತಮ್ಮ ಕ್ಷೇತ್ರಗಳಲ್ಲಿ ಮುಂದುವರಿದ ಮತ್ತು ಉನ್ನತ ಪದವಿಗಳನ್ನು ಪಡೆದಿರುತ್ತಾರೆ ಅಲ್ಲದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ.

ಗ್ರಂಥಾಲಯ

ಶಾಲೆಯು  ಗ್ರಂಥಾಲಯವನ್ನು ಹೊಂದಿದ್ದು ಸಾವಿರಕ್ಕೂ ಅಧಿಕ ಪುಸ್ತಕಗಳ ಲಭ್ಯವಿರುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡದು ತಮ್ಮ ಸೃಜನಾತ್ಮಕ ಬರವಣಿಗೆಗೆ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉತ್ತಮ ವ್ಯವಸ್ಥೆಯಾಗಿದೆ.

ಕಂಪ್ಯೂಟರ್ ಪ್ರಯೋಗಾಲಯ

ನಮ್ಮ ಶಾಲೆಯಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಸಹಕಾರದಿಂದ ಒಟ್ಟು ಆರು ಕಂಪ್ಯೂಟರ್ಗಳು ಮತ್ತು ಒಂದು ಸ್ಮಾರ್ಟ್ ಟಿವಿ ಇದ್ದು, ಕಂಪ್ಯೂಟರ್ ಶಿಕ್ಷಣಕ್ಕೆ ಪ್ರತ್ಯೇಕ ಅಧ್ಯಾಪಕರು ಇದ್ದು ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕಂಪ್ಯೂಟರ್ ಜ್ಞಾನವನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ವಿಶೇಷ ತರಬೇತಿ ಯನ್ನು ಪಡೆದು ಮುಂದಿನ ವೃತ್ತಿಪರ ಜೀವನಕ್ಕೆ ಸಹಾಯವಾಗುವ ರೀತಿಯಲ್ಲಿ ಕಂಪ್ಯೂಟರ್ ವಿದ್ಯಾಭ್ಯಾಸ ವನ್ನ ಇಲ್ಲಿ ಹೇಳಿಕೊಡಲಾಗುವುದು. ರೋಟರಿ ಕ್ಲಬ್ ವತಿಯಿಂದ ಒಂದು ಪ್ರೊಜೆಕ್ಟರ್ ಅಳವಡಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಿಸುವ ಕನಸು ನಮ್ಮದಾಗಿದೆ.

ವಿಜ್ಞಾನ ಪ್ರಯೋಗಾಲಯ

ಶಾಲೆಯು ಅಗತ್ಯತೆಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕಾಗಿ ಪ್ರಯೋಗಾಲಯಗಳೊಂದಿಗೆ ಸಮರ್ಪಕವಾಗಿ ಸಜ್ಜುಗೊಂಡಿದೆ. ವಿಜ್ಞಾನಕ್ಕೆ ಬೇಕಾಗುವ ಎಲ್ಲ ತರದ ಪ್ರಯೋಗಗಳನ್ನು ಮಾಡುವ ವ್ಯವಸ್ಥೆ ಇದ್ದು ಮಕ್ಕಳಿಗೆ ವಿಜ್ಞಾನ ವಿಷಯವನ್ನು ಪ್ರಯೋಗಗಳ ಮುಖಾಂತರ ಹೆಚ್ಚಿನ ಮಾಹಿತಿಯನ್ನ ಮನದಟ್ಟು ಮಾಡುವಲ್ಲಿ ನಮ್ಮ ಪ್ರಯೋಗಾಲಯವನ್ನ ಸಜ್ಜುಗೊಳಿಸಲಾಗಿದೆ.

ಕ್ರೀಡಾ ಸೌಲಭ್ಯಗಳು

ಶಾಲಾ ಸಮಯದಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಸುಧಾರಿಸಲು ಶಾಲೆಗಳು ಕೆಲಸ ಮಾಡುತ್ತಿಲ್ಲ ಎಂದು ಇಂದು ಹೆಚ್ಚಿನ ಪೋಷಕರು ಚಿಂತಿಸುತ್ತಾರೆ. ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸಲು ಹೊಸ ಮತ್ತು ಉತ್ತಮ ಮಾರ್ಗಗಳನ್ನು ಹುಡುಕುತ್ತಿವೆ. ನಮ್ಮ  ಪ್ರೌಢಶಾಲೆಯಲ್ಲಿ ಕ್ರೀಡೆ ಮತ್ತು ಆಟಗಳ ಪಠ್ಯಕ್ರಮವು ಶಿಕ್ಷಣ ಪ್ರಕ್ರಿಯೆಯ ಅವಿಭಾಜ್ಯ ಮತ್ತು ಕಡ್ಡಾಯ ಭಾಗವಾಗಿದೆ. ಕ್ರೀಡೆಗಳು ವ್ಯಕ್ತಿತ್ವವನ್ನು ನಿರ್ಮಿಸಲು ಮತ್ತು ಜೀವನದಲ್ಲಿ ಶಿಸ್ತಿನ ಮಹತ್ವವನ್ನು ಕಲಿಸಲು ಸಹಾಯ ಮಾಡುತ್ತದೆ. ಇದು ನಿಯಮಗಳಿಗೆ ಗೌರವವನ್ನು ಉಂಟುಮಾಡುತ್ತದೆ ಮತ್ತು ಭಾಗವಹಿಸುವವರಿಗೆ ಸ್ವಯಂ ನಿಯಂತ್ರಣದ ಮೌಲ್ಯವನ್ನು ಕಲಿಯಲು ಅನುವು ಮಾಡಿಕೊಡುತ್ತದೆ. ಅನುಭವೀ ಶಿಕ್ಷಕರಾದ ಶ್ರೀ ಮಂಜುನಾಥ ನಾಯಕ್ ಇವರು ಮಗುವಿನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ. 

ಈ ರೀತಿ ಮಾರ್ಗದರ್ಶನವನ್ನು ಪಡೆದ ವಿದ್ಯಾರ್ಥಿಗಳು ಸತತ 20 ಬಾರಿ ವಯಕ್ತಿಕ ಕ್ರೀಡೆಗಳಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದು ನಮ್ಮ ಶಾಲೆಯ ಸಾಧನೆ. ನಾಲ್ಕು ಬಾರಿ ರಾಜ್ಯಮಟ್ಟದಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. ಸತತ ಒಂಬತ್ತು ಬಾರಿ ಥ್ರೋ ಬಾಲ್ ಗುಂಪು ಆಟದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  ಎರಡು ಬಾರಿ ರಾಷ್ಟ್ರಮಟ್ಟಕ್ಕೆ ವೈಯಕ್ತಿಕ ಆಟದಲ್ಲಿ ಆಯ್ಕೆಯಾಗಿರುತ್ತಾರೆ. ಇದೊಂದು ಅವಿಸ್ಮರಣೀಯ ಸಾಧನೆ ಎಂದರೆ ಅತಿಶಯೋಕ್ತಿ ಆಗಲಾರದು.

2024-25 ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಇಲಾಖೆಯು ಪ್ರತಿ ವರ್ಷ ನಡೆಸುವ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾದ ಮೂವರು ವಿದ್ಯಾರ್ಥಿನಿಯರು ವಿವಿಧ ಮೇಲಾಟ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ ಕುಮಾರಿ ಭೂಮಿಕಾ ಈಶ್ವರ ನಾಯ್ಕ ಜಗಳೆಮನೆ ಗುಂಡು ಎಸೆತ ಪ್ರಥಮ, ಕುಮಾರಿ ಚೈತನ್ಯ ದೇವರು ಮರಾಠಿ ಹುಲಿಮನೆ ತ್ರಿವಿಧ ಜಿಗಿತ ಪ್ರಥಮ ಮತ್ತು ಉದ್ದ ಜಿಗಿತ ದ್ವಿತೀಯ, ಕುಮಾರಿ ಸೌಜನ್ಯ ದೇವರು ಮರಾಠಿ ಜಾವೆಲಿನ್ ಎಸೆತದಲ್ಲಿ ಪ್ರಥಮ ಮತ್ತು ಕುಮಾರಿ ಪ್ರೇಮಾಂಜಲಿ ಮಂಜುನಾಥ ಮೊಗೇರ ಜಗಳೆಮನೆ ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಕ್ರೀಡಾ ಕ್ಷೇತ್ರದಲ್ಲಿ ಹೆಗಡೆಕಟ್ಟಾ ಪ್ರೌಢಶಾಲೆಯ ಸಾಧನೆಯನ್ನು ಈ ವರ್ಷವೂ ಮುಂದುವರಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ ನಾಯಕ ಅವರು ಈ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿ, ಶುಭ ಹಾರೈಸಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟವು ದಿನಾಂಕ 8 ನವೆಂಬರ್ 2024 ರಂದು ಕೋಲಾರದಲ್ಲಿ ನಡೆಯಲಿದೆ.