50+ ವರ್ಷಗಳ

ಶೈಕ್ಷಣಿಕ ಶ್ರೇಷ್ಠತೆಯ ಪರಂಪರೆ

ಸರ್ವಾಂಗೀಣ ಶಿಕ್ಷಣ

ಜ್ಞಾನ, ಮೌಲ್ಯ ಮತ್ತು ವ್ಯಕ್ತಿತ್ವ ವಿಕಾಸ

ಅನುಭವಿ ಶಿಕ್ಷಕ ವೃಂದ

ಮಾರ್ಗದರ್ಶಕರು ಮತ್ತು ಸಲಹೆಗಾರರು

ಆಧುನಿಕ ಸೌಲಭ್ಯಗಳು

21ನೇ ಶತಮಾನದ ಶಿಕ್ಷಣಕ್ಕಾಗಿ

ಮೌಲ್ಯಾಧಾರಿತ ಶಿಕ್ಷಣ

ಉತ್ತಮ ಜೀವನದ ಅಡಿಪಾಯ

ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ ಪ್ರೌಢಶಾಲೆಗೆ ಸ್ವಾಗತ

ಕರ್ನಾಟಕದ ಕಾಶ್ಮೀರ, ನಿಸರ್ಗ ತಾಣ, ಭೂಲೋಕದ ಸ್ವರ್ಗ ಎಂಬ ಬಿರುದಾವಳಿಗಳನ್ನು ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಹಲವು ವೈವಿಧ್ಯತೆವುಳ್ಳ ಸುಂದರ ಪ್ರಾಕೃತಿಕ ರಮ್ಯ ತಾಣವಾದ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಕ್ರಿಸ್ತಶಕ 1967 ರಲ್ಲಿ ಪ್ರಾರಂಭವಾದ ನಮ್ಮದೊಂದು ಸುಂದರ ಶಾಲೆ. ಶಾಲೆಯು 8 ರಿಂದ 10 ನೇ ತರಗತಿಯ ತರಗತಿಗಳನ್ನು ಒಳಗೊಂಡಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ತಲಿಪಿಸುವ ಎಲ್ಲಾ ಆಧುನಿಕ ಮೂಲ ಸೌಕರ್ಯಗಳನ್ನ ಹಾಗು ಉನ್ನತ ಮಟ್ಟದ ಅಧ್ಯಾಪಕ ವೃಂದವನ್ನು ಹೊಂದಿದೆ. ಶಾಲೆಯು ರುಚಿಯಾದ ಹಾಗು ಶುಚಿಯಾದ ಉಚಿತ ಮದ್ಯಾಹ್ನ ದ ಊಟದ ಜೊತೆಗೆ ಬೇಯಿಸಿದ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣಿನ್ನು  ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆಯನ್ನ ಹೊಂದಿರುತ್ತದೆ. ಶಾಲೆಯ ಶೈಕ್ಷಣಿಕ ಪ್ರವೇಶವು ಪ್ರತೀ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ.

56 ರ ಹರೆಯದ ನಮ್ಮ ಶಾಲೆ ಮಾಡಿದ ಸಾಧನೆಗಳು ಅವೆಷ್ಟೋ.. ಸಾಧನೆಯ ಹಾದಿಯಲ್ಲಿ ನಡೆದ ಹೆಜ್ಜೆಗಳು ಅವೆಷ್ಟು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಜ್ಞಾನಿ, ಡಾಕ್ಟರ್‌, ಇಂಜಿನಿಯರ್, ಸಾಹಿತಿ, ಕಲಾವಿದರು ಹಾಗೂ ಉದ್ಯಮಿಗಳಾಗಿ ದೇಶ ವಿದೇಶಗಳಲ್ಲಿ ಸಾಧನೆ ಮಾಡಿ ಸಮಾಜದ ಗಣ್ಯರಲ್ಲಿ ತಮ್ಮನ್ನೂ ಗುರುತಿಸಿಕೊಂಡಿದ್ದಾರೆ.

ನಮ್ಮ ಸಂಸ್ಥೆಯ ಧ್ಯೇಯ

ನಮ್ಮ ವಿದ್ಯಾರ್ಥಿಗಳಿಗೆ ಸ್ವಚ್ಛ ಸಮಾಜವನ್ನು ರೂಪಿಸುವ, ಪ್ರಕೃತಿಯನ್ನು ರಕ್ಷಿಸುವ, ನೈತಿಕತೆ, ಸಹಿಷ್ಣುತೆ, ಸಹೋದರತೆ, ಸೌಹಾರ್ದತೆಗಳನ್ನು ಬೆಳೆಸುವ, ಜವಾಬ್ದಾರಿಯುತ ಕಲಿಕೆ ಮತ್ತು ಗ್ರಹಿಕೆಯ ಮೌಲ್ಯಯುತ ಉತ್ತಮ ಉಚಿತ ಶಿಕ್ಷಣವನ್ನು ನೀಡುವುದು.

ಪ್ರತಿ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ

ದೃಢ ಶೈಕ್ಷಣಿಕ ಅಡಿಪಾಯ

ಸ್ಪಷ್ಟತೆ ಮತ್ತು ಅರಿವಿನೊಂದಿಗೆ ಕಲಿಕೆ

ಸೃಜನಾತ್ಮಕ ಮತ್ತು ನವೀನ ಕಲಿಕೆ

ಸ್ಮಾರ್ಟ್ ತರಗತಿಗಳು, ಡಿಜಿಟಲ್ ಸಾಧನಗಳು ಮತ್ತು ಚಟುವಟಿಕೆ ಆಧಾರಿತ ಶಿಕ್ಷಣ

ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣ

ಪ್ರಯೋಗಾತ್ಮಕ ಕಲಿಕೆಯ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣತಿ.

ಸಂವಹನ ಹಾಗೂ ಕಲಾ ಶಿಕ್ಷಣ

ಭಾಷಾ ಪ್ರಾವೀಣ್ಯ, ಪರಿಣಾಮಕಾರಿ ಸಂವಹನ ಮತ್ತು ಕಲಾತ್ಮಕ ಪ್ರತಿಭೆಯ ಬೆಳವಣಿಗೆ.

ಕ್ರೀಡೆ ಮತ್ತು ದೈಹಿಕ ಸಾಮರ್ಥ್ಯ

ಸಮಗ್ರ ಬೆಳವಣಿಗೆಗಾಗಿ ಕ್ರೀಡೆ ಮತ್ತು ದೈಹಿಕ ಶಿಕ್ಷಣ.

ಮುಖ್ಯೋಪಾದ್ಯಾಯರ ಮನದಾಳದ ಮಾತು

ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ |

ಸ್ವದೇಶೆ ಪೂಜ್ಯತೆ ರಾಜ ವಿದ್ವಾನ್ ಸರ್ವತ್ರ ಪೂಜ್ಯತೆ ।।

ರಾಜನು ಕೇವಲ ತನ್ನ ದೇಶದಲ್ಲಿ ಮಾತ್ರ ಗೌರವಿಸಲ್ಪಡುತ್ತಾನೆ, ವಿದ್ವಾಂಸರಾದರೋ ಎಲ್ಲೆಡೆಯೂ ಗೌರವಿಸಲ್ಪಡುತ್ತಾರೆ. ಹೀಗೆ ನಮ್ಮೂರ ಮಕ್ಕಳನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿ ಬೆಳೆಸುವ ಆಶಯದೊಂದಿಗೆ ಈ ಭಾಗದ ಎಲ್ಲಾ ಹಿರಿಯರು ದಿವಂಗತ ಪರಮೇಶ್ವರ ಹೆಗಡೆ ಹೊನ್ನೆಕಟ್ಟ ಇವರ ನೇತೃತ್ವದಲ್ಲಿ ಸ್ಥಾಪಿತವಾದ ಶಾಲೆಯೇ ಶ್ರೀ ಗಜಾನನ ಸೆಕೆಂಡ್ ಸ್ಕೂಲ್ ಹೆಗಡೆಕಟ್ಟಾ. ಈ ವಿದ್ಯಾ ಸಂಸ್ಥೆಯು 1997 ರಲ್ಲಿ ಬೆಳಿ ಹಬ್ಬವನ್ನು 2023ರಲ್ಲಿ ಸುವರ್ಣ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ಆಚರಿಸಿಕೊಂಡು ತಾಲೂಕಿನ ಪ್ರಮುಖ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ.

ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ಜ್ಞಾನದ ಬೆಳಕಾಗಿ ವಿದ್ಯಾ ದಾನ ಮಾಡಿದ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಮಾಜದಲ್ಲಿ ಸುಸಂಸ್ಕೃತ ನಾಗರಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದು ಈಗಲೂ ಶಾಲೆಯ ಸಂಪರ್ಕದಲ್ಲಿರುವುದು ಸಂತೋಷದ ಸಂಗತಿ.

ಶಾಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರಾಂಕ್ ವಿಜೇತರ ಸಂಖ್ಯೆ ಹೆಚ್ಚುತ್ತಿದೆ. ಕ್ರೀಡೆ ಸಾಂಸ್ಕೃತಿಕ ಹಾಗೂ ಇತರೆ ಸ್ಪರ್ಧೆಗಳಲ್ಲಿ ಪ್ರತಿವರ್ಷವೂ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದು ನಾವೆಂದು ಸಾಧಕರೇ ಎಂಬುದನ್ನು ಸಾದರಪಡಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಏಳು ಶಿಕ್ಷಕರು (ಮುಖ್ಯ ಅಧ್ಯಾಪಕರು ಸೇರಿ) ಇಬ್ಬರು ಸಿಬ್ಬಂದಿಗಳು ಇದ್ದು ಒಂದು ನೂರ ಐವತ್ತೊಂಬತ್ತು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ  ಶಿಕ್ಷಣ ನೀಡುತ್ತಿದ್ದಾರೆ. ಶೌಚಾಲಯಗಳು, ಕುಡಿಯುವ ನೀರು, ಬಿಸಿಊಟ, ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ಸಭಾಭವನ, ಕ್ರೀಡಾಮೈದಾನ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಮ್ಮ ಶಾಲೆ ಉತ್ತಮ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ 

ಶ್ರೀಮತಿ ವೀಣಾ ಭಟ್ಟ

ಮುಖ್ಯೋಪಾಧ್ಯರು, ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ

ಇಂದಿನ ಶಿಕ್ಷಣ... ನಾಳೆಯ ಯಶಸ್ಸು...

ಅನುಭವಿ ಶಿಕ್ಷಕರು, ಆಧುನಿಕ ಸೌಲಭ್ಯಗಳು ಮತ್ತು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಸಂಕಲ್ಪ.

  • Testimonial 4
    ನಮ್ಮ ಮಗುವಿನ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಈ ಶಾಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅನುಭವೀ ಶಿಕ್ಷಕರು, ಉತ್ತಮ ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿ ನಮ್ಮಲ್ಲಿ ವಿಶ್ವಾಸ ಮೂಡಿಸಿದೆ.
    ವಿದ್ಯಾರ್ಥಿಯ ಪೋಷಕರು
  • Testimonial 3
    ಶಾಲೆಯ ಉತ್ತಮ ಶಿಸ್ತು, ಸ್ನೇಹಪರ ವಾತಾವರಣ ಮತ್ತು ಗುಣಮಟ್ಟದ ಶಿಕ್ಷಣದಿಂದ ನನಗೆ ಓದಿನ ಮೇಲೆ ಹೆಚ್ಚಿನ ಆಸಕ್ತಿ ಮೂಡಿದೆ. ಶಿಕ್ಷಕರ ಮಾರ್ಗದರ್ಶನದಿಂದ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ.
    8ನೇ ತರಗತಿ ವಿದ್ಯಾರ್ಥಿ
  • ಇಲ್ಲಿನ ಶಿಕ್ಷಕರು ಸದಾ ಪ್ರೋತ್ಸಾಹ ನೀಡಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ನಿಯಮಿತ ಪರೀಕ್ಷೆಗಳು, ವಿಶೇಷ ತರಗತಿಗಳು ಮತ್ತು ಮಾರ್ಗದರ್ಶನದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಲು ಸಹಾಯವಾಗಿದೆ.
    9ನೇ ತರಗತಿ ವಿದ್ಯಾರ್ಥಿನಿ
  • Testimonial 1
    ನಮ್ಮ ಶಾಲೆಯಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ವೈಯಕ್ತಿಕವಾಗಿ ಗಮನಿಸಿ ಬೋಧಿಸುತ್ತಾರೆ. ಪಾಠಗಳು ಸುಲಭವಾಗಿ ಅರ್ಥವಾಗುತ್ತವೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಮೌಲ್ಯ ಶಿಕ್ಷಣಕ್ಕೂ ಸಮಾನ ಆದ್ಯತೆ ನೀಡಲಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ವಿಷಯ.
    10ನೇ ತರಗತಿ ವಿದ್ಯಾರ್ಥಿ